ಶ್ರೀನಿವಾಸ ಉಡುಪ ಅನೇಕ ಕಾದಂಬರಿಗಳನ್ನು ಪ್ರಕಟಿಸಿದ ಕನ್ನಡ ಲೇಖಕರಾಗಿದ್ದರು. ೧೯೩೩ ಜನೆವರಿ ೮ರಂದು ಹೊಸನಗರ ತಾಲೂಕಿನ ಹುಂಚದಲ್ಲಿ ಜನಿಸಿದ ಇವರು ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕಥಾಸಂಕಲನ, ನಾಟಕ, ಕಾದಂಬರಿಗಳನ್ನು ಪ್ರಕಟಿಸಿದ್ದ ಶ್ರೀನಿವಾಸ ಉಡುಪರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ಆಕಾಶವಾಣಿ ಪುರಸ್ಕಾರ ಮೊದಲಾದ ಗೌರವಗಳು ಸಂದಿವೆ. == ಕೃತಿಗಳು == ಶ್ರೀನಿವಾಸ ಉಡುಪ ಎಂಬ ಹೆಸರಲ್ಲದೇ 'ಶ್ರೀಮುಖ', 'ಹೋಶ್ರೀ' ಮತ್ತು 'ಶ್ರೀಶ' ಕಾವ್ಯನಾಮಗಳಿಂದ ಸುಮಾರು ೬೦ ಕಾದಂಬರಿಗಳು, ೧೩ ಕಥಾಸಂಕಲನಗಳು, ೧೬ ಮಕ್ಕಳ ಕೃತಿಗಳು, ೬ ನಾಟಕಗಳು, ೮ ಸಂಪಾದಿತ ಕೃತಿಗಳು, ಒಂದು ವಿಮರ್ಶೆ ಹಾಗೂ ಒಂದು ಕ್ಷೇತ್ರ ದರ್ಶನ ಕೃತಿ ಸೇರಿ ಅವರ ಸಾಹಿತ್ಯ ಕೃತಿಗಳ ಒಟ್ಟು ಸಂಖ್ಯೆ ನೂರಕ್ಕೂ ಹೆಚ್ಚು. === ಕಥಾಸಂಕಲನ === ಮನೆಗೆ ಬಂದ ಮಗಳು(೧೯೫೭) ನಿರಾಶೆಯ ಕೊನೆಯಲ್ಲಿ(೧೯೫೯) ಕಪ್ಪುಬೆಳಗಿತು (೧೯೬೦) ಅವಳ ಕಥೆ (೧೯೬೦) ಬದುಕು (೧೯೬೫) ಹೆಗ್ಗಡತಿ ಹೆತ್ತ ದೆವ್ವ (೧೯೬೫) ಹೊಸ ಕಥೆಗಳು (೧೯೬೭) ಪುರಾಣ ಕಥೆಗಳು (೧೯೭೩) ಸಂಭಾವಿತ (೧೯೭೭) === ನಾಟಕ === ರೇಷ್ಮೆ ಸೀರೆ ಅಮೃತ ಹೃದಯ ಗಣಪತಿ ಭರವಸೆ ಮದುವೆ ಹೆಣ್ಣು === ಕಾದಂಬರಿ === ಒಲಿದು ಬಂದವಳು ಕೆಂಪು ತುಟಿ ಜೀವನದ ಜೊತೆಗಾರ ತುಂಬಿದ ಬಾಳು ಪ್ರೇಮದ ಮನೆ ಬಾಳಿನ ವೈಭವ ಮನೆಗೆ ಬಂದವಳು ವಿಜಯಲಕ್ಷ್ಮಿ ಶೀಲವಂತೆ ಸೋತ ಹೃದಯ ಸ್ನೇಹಶೀಲೆ === ಮಕ್ಕಳ ಕಾದಂಬರಿ === ಅಭಿಮನ್ಯು == ಪುರಸ್ಕಾರ == ಒಲಿದು ಬಂದವಳು’ ಕೃತಿಗೆ ೧೯೬೭ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಅವರು ಭೂತನಾಡನ್ನು ದಾಟಿ ಬಂದರು’ ಕಥೆಗೆ ೧೯೬೦ ರಲ್ಲಿ ಬೆಂಗಳೂರಿನ ಪೀಪಲ್‌ ಆರ್ಟಿಸ್ಟ್‌ಸ್‌ ಅಸೋಸಿಯೇಷನ್‌ ಪ್ರಶಸ್ತಿ ಅಮೃತಮಯಿ’ ನಾಟಕಕ್ಕೆ ೧೯೬೨ ರಲ್ಲಿ ಅಖಿಲ ಭಾರತ ಆಕಾಶವಾಣಿ ಬೆಂಗಳೂರು ಪ್ರಶಸ್ತಿ ಒಲಿದು ಬಂದವಳು’ ಕಾದಂಬರಿಗೆ ೧೯೬೭ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ‘ರೇಷ್ಮೆಸೀರೆ’ ನಾಟಕಕ್ಕೆ ೧೯೭೫ ರಲ್ಲಿ ವಿಶಾಲ ಕರ್ನಾಟಕ ದೀಪಾವಳಿ ನಾಟಕ ಸ್ಪರ್ಧಾ ಪ್ರಶಸ್ತಿ ಸಂಭಾವಿತ’ ಕಥಾಸಂಕಲನಕ್ಕೆ ೧೯೭೮ ರಲ್ಲಿ ದೇವರಾಜ ಬಹದ್ದೂರ್ ಪ್ರಶಸ್ತಿ